ಗೂಗಲ್ ಪೇ (ಹಿಂದೆ ಆಂಡ್ರಾಯ್ಡ್ ಪೇ) ಎಂಬುದು ಜಂಗಮ ಸಾಧನಗಳಲ್ಲಿ ಇರುವ ಒಂದು ಅಪ್ಲಿಕೇಶನ್ ಆಗಿದೆ. ಆನ್ಲೈನ್ ಮತ್ತು ವೈಯಕ್ತಿಕ ಸಂಪರ್ಕರಹಿತ ಖರೀದಿಗಳಿಗೆ ಶಕ್ತಿ ತುಂಬಲು ಗೂಗಲ್ ಅಭಿವೃದ್ಧಿಪಡಿಸಿದ ಮೊಬೈಲ್ ಪಾವತಿ ಸೇವೆಯಾಗಿದೆ. ದೂರವಾಣಿಗಳು ಅಥವಾ ಕೈಗಡಿಯಾರಗಳೊಂದಿಗೆ ಬಳಕೆದಾರರಿಗೆ ಪಾವತಿಗಳನ್ನು ಮಾಡಲು ಅನುವು ಮಾಡಿಕೊಡುತ್ತದೆ. ೨೦೨೪ ರ ಹೊತ್ತಿಗೆ ಇದು ಪ್ರಸ್ತುತ ೭೯ ದೇಶಗಳಲ್ಲಿ ಲಭ್ಯವಿದೆ. == ಸೇವೆ == ಕಾಗದದ ಮಾಹಿತಿಯನ್ನು ರವಾನಿಸಲು ಗೂಗಲ್ ಪೇ ನಿಯರ್-ಫೀಲ್ಡ್ ಕಮ್ಯುನಿಕೇಷನ್ (ಎನ್ಎಫ್ಸಿ) ಅನ್ನು ಬಳಸುತ್ತದೆ. ಇದು ಚಿಲ್ಲರೆ ವ್ಯಾಪಾರಿಗಳಿಗೆ ಹಣ ವರ್ಗಾವಣೆಗ ಮಾಡಲು ಅನುಕೂಲವಾಗುತ್ತದೆ. ಇದು ಈಗಾಗಲೇ ಅನೇಕ ದೇಶಗಳಲ್ಲಿ ಬಳಸಲಾಗುವ ಸಂಪರ್ಕರಹಿತ ಪಾವತಿಗಳಿಗೆ ಹೋಲುತ್ತದೆ. ಎರಡು-ಅಂಶಗಳ ದೃಢೀಕರಣವನ್ನು ಸೇರಿಸಲಾಗಿದೆ. ನಿಯರ್ ಫೀಲ್ಡ್ ಕಮ್ಯುನಿಕೇಷನ್ (ಎನ್ಎಫ್ಸಿ) ಆಂಟೆನಾ ಮತ್ತು ಹೋಸ್ಟ್ ಆಧಾರಿತ ಕಾರ್ಡ್ ಎಮುಲೇಷನ್ (ಎಚ್ಸಿಇ) ಬಳಸಿ ಆಂಡ್ರಾಯ್ಡ್ ಸಾಧನಗಳು ಪಾಯಿಂಟ್ ಆಫ್ ಸೇಲ್ ಸಿಸ್ಟಮ್ಗಳೊಂದಿಗೆ ವೈರ್ಲೆಸ್ ಆಗಿ ಸಂವಹನ ನಡೆಸಲು ಈ ಸೇವೆ ಅನುವು ಮಾಡಿಕೊಡುತ್ತದೆ. ಬಳಕೆದಾರರು ವ್ಯಾಪಾರಿಗೆ ಪಾವತಿ ಮಾಡಿದಾಗ ಗೂಗಲ್ ಪೇ ನಿಜವಾದ ಪಾವತಿ ಕಾರ್ಡ್ ಸಂಖ್ಯೆಯನ್ನು ಕಳುಹಿಸುವುದಿಲ್ಲ. ಬದಲಾಗಿ ಇದು ಬಳಕೆದಾರರ ಖಾತೆ ಮಾಹಿತಿಯನ್ನು ಪ್ರತಿನಿಧಿಸುವ ವಾಸ್ತವ ಖಾತೆ ಸಂಖ್ಯೆಯನ್ನು ರಚಿಸುತ್ತದೆ. ಗೂಗಲ್ ಪೇ ತೆರೆಯಲು ಪರದೆಯ ಬೀಗವನ್ನು ಹೊಂದಿಸಬೇಕಾಗುತ್ತದೆ. ಇದಕ್ಕೆ ಯಾವುದೇ ಪಾವತಿ ಕಾರ್ಡ್ ಮಿತಿ ಇಲ್ಲ. ಬಳಕೆದಾರರು ಕಾರ್ಡ್‌ನ ಭಾವಚಿತ್ರ ತೆಗೆದುಕೊಳ್ಳುವ ಮೂಲಕ ಅಥವಾ ಕಾರ್ಡ್ ಮಾಹಿತಿಯನ್ನು ಹಸ್ತಚಾಲಿತವಾಗಿ ನಮೂದಿಸುವ ಮೂಲಕ ಸೇವೆಗೆ ಪಾವತಿ ಕಾರ್ಡ್ ಗಳನ್ನು ಸೇರಿಸಬಹುದು. ಪಾಯಿಂಟ್ ಆಫ್ ಸೇಲ್ ನಲ್ಲಿ ಪಾವತಿಸಲು ಬಳಕೆದಾರರು ದೃಢೀಕರಣವನ್ನು ಮಾಡುತ್ತಾರೆ. === ತಂತ್ರಜ್ಞಾನ === ಈ ಸೇವೆಯು ಗ್ರಾಹಕರ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಫಂಡಿಂಗ್ ಪ್ರೈಮರಿ ಅಕೌಂಟ್ ನಂಬರ್ (ಎಫ್ಪಿಎಎನ್) ಅನ್ನು ಟೋಕನೈಸ್ಡ್ ಡಿವೈಸ್ ಪ್ರೈಮರಿ ಅಕೌಂಟ್ ನಂಬರ್ (ಡಿಪಿಎಎನ್) ನೊಂದಿಗೆ ಬದಲಾಯಿಸುವ ಮೂಲಕ ಗ್ರಾಹಕರ ಪಾವತಿ ಮಾಹಿತಿಯನ್ನು ಚಿಲ್ಲರೆ ವ್ಯಾಪಾರಿಯಿಂದ ಖಾಸಗಿಯಾಗಿರಿಸುತ್ತದೆ ಮತ್ತು "ಡೈನಾಮಿಕ್ ಸೆಕ್ಯುರಿಟಿ ಕೋಡ್ " ಅನ್ನು ರಚಿಸುತ್ತದೆ. "ಡೈನಾಮಿಕ್ ಸೆಕ್ಯುರಿಟಿ ಕೋಡ್" ಎಂಬುದು ಇಎಂವಿ-ಮೋಡ್ ವಹಿವಾಟಿನಲ್ಲಿ ಕ್ರಿಪ್ಟೋಗ್ರಾಮ್ ಆಗಿದೆ ಮತ್ತು ಮ್ಯಾಗ್ನೆಟಿಕ್-ಸ್ಟ್ರೈಪ್-ಡೇಟಾ ಎಮುಲೇಶನ್-ಮೋಡ್ ವಹಿವಾಟಿನಲ್ಲಿ ಡೈನಾಮಿಕ್ ಕಾರ್ಡ್ ಪರಿಶೀಲನಾ ಮೌಲ್ಯ (ಡಿಸಿವಿವಿ) ಆಗಿದೆ. ಬಳಕೆದಾರರು ಗೂಗಲ್ನ ಫೈಂಡ್ ಮೈ ಡಿವೈಸ್ ಸೇವೆಯ ಮೂಲಕ ಕಳೆದುಹೋದ ಜಂಗಮದಲ್ಲಿ ಸೇವೆಯನ್ನು ದೂರದಿಂದಲೇ ನಿಲ್ಲಿಸಬಹುದು. ಪಾಯಿಂಟ್ ಆಫ್ ಸೇಲ್ ನಲ್ಲಿ ಪಾವತಿಸಲು ಬಳಕೆದಾರರು ತಮ್ಮ ಅಧಿಕೃತ ಆಂಡ್ರಾಯ್ಡ್ ಸಾಧನವನ್ನು ಪಾಯಿಂಟ್-ಆಫ್-ಸೇಲ್ ಸಿಸ್ಟಮ್ ನ ಎನ್ ಎಫ್ ಸಿ ರೀಡರ್ ಗೆ ಹಿಡಿದಿಡುತ್ತಾರೆ. ಆಂಡ್ರಾಯ್ಡ್ ಬಳಕೆದಾರರು ಬಯೋಮೆಟ್ರಿಕ್ಸ್,\ ಮಾದರಿ ಅಥವಾ ಪಾಸ್ಕೋಡ್ ಬಳಸಿ ತಮ್ಮ ಫೋನ್ ಅನ್ಲಾಕ್ ಮಾಡುವುದನ್ನು ದೃಢೀಕರಿಸುತ್ತಾರೆ, ಆದರೆ ವೇರ್ ಓಎಸ್ ಮತ್ತು ಫಿಟ್ಬಿಟ್ ಓಎಸ್ ಬಳಕೆದಾರರು ಪಾವತಿಗೆ ಮೊದಲು ಗೂಗಲ್ ವ್ಯಾಲೆಟ್ ಅಪ್ಲಿಕೇಶನ್ ತೆರೆಯುವ ಮೂಲಕ ದೃಢೀಕರಿಸುತ್ತಾರೆ. === ಗ್ರಾಹಕ ಸಾಧನ ಕಾರ್ಡ್ ಹೋಲ್ಡರ್ ಪರಿಶೀಲನಾ ವಿಧಾನ === ಇಎಂವಿ ವಹಿವಾಟುಗಳಲ್ಲಿ ಬಯೋಮೆಟ್ರಿಕ್ಸ್ ಮಾದರಿ ಅಥವಾ ಸಾಧನದ ಪಾಸ್ಕೋಡ್ ಬಳಸಿ ಗ್ರಾಹಕ ಸಾಧನ ಕಾರ್ಡ್ಹೋಲ್ಡರ್ ಪರಿಶೀಲನಾ ವಿಧಾನ (ಸಿಡಿಸಿವಿಎಂ) ಬಳಕೆಯನ್ನು ಗೂಗಲ್ ಪೇ ಬೆಂಬಲಿಸುತ್ತದೆ. ಸಿಡಿಸಿವಿಎಂನ ಬಳಕೆಯು ವ್ಯವಹಾರಕ್ಕೆ ಪರಿಶೀಲನೆಯನ್ನು ಒದಗಿಸಲು ಸಾಧನವನ್ನು ಅನುಮತಿಸುತ್ತದೆ. ಕಾರ್ಡ್ ಹೊಂದಿರುವವರು ಸ್ವೀಕೃತಿಗೆ ಸಹಿ ಮಾಡುವ ಅಥವಾ ಅವರ ಪಿನ್ ನಮೂದಿಸುವ ಅಗತ್ಯವಿಲ್ಲ. == ಲಭ್ಯತೆ == ಗೂಗಲ್ ವ್ಯಾಲೆಟ್ ಇರುವ ಎಲ್ಲಾ ಪ್ರದೇಶಗಳಲ್ಲಿ ಗೂಗಲ್ ಪೇ ಲಭ್ಯವಿದೆ. == ಇದನ್ನೂ ನೋಡಿ == ಆಪಲ್ ಪೇ ಆಪಲ್ ವ್ಯಾಲೆಟ್ ಕ್ಯಾಶ್ ಆಪ್ ಮೈಕ್ರೊಸಾಪ್ಟ್ ಪೇ ಪೇ ಪಾಲ್ ಸ್ಯಾಮ್ ಸಂಗ್ ಪೇ ಸ್ಯಾಮ್ ಸಂಗ್ ವ್ಯಾಲೆಟ್ ಏಕೀಕೃತ ಪಾವತಿ ಇಂಟರ್ಫೇಸ್ ವೆನ್ಮೋ ವಿಚಾಟ್ ಪೇ == ಉಲ್ಲೇಖಗಳು ==